Search This Blog

Wednesday, July 27, 2011

ಮಾದರಿ

ಹೇಳುತ್ತಿದ್ದರು ಮೊದಲು ಅಭಿವ್ರುದ್ಧಿಯಲ್ಲಿ
ನಮಗೆ ಮೋದಿಯೇ ಮಾದರಿ
ಆದರೆ ಮಾಡಿದರು ಸ್ವ- ಅಬಿವೃದ್ಧಿ
ರಾಜ್ಯದ ಅದಿರು ಮಾರಿ

ರಾಜಕೀಯ

ನಮ್ಮ ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿಗೆ
ಲೋಕಾಯುಕ್ತ ವರದಿಯೇ ಕಾರಣ
ನಮ್ಮವರು ಮಾಡಿದ್ದು ಬರೀ
ಹಗರಣ ಹಗರಣ ಹಗರಣ

Sunday, September 5, 2010

ನಿಜ - ಸಜ

ಕೇವಲ ಒಂದು ಹುಡುಗಿಗೋಸ್ಕರ ತನ್ನ ಹೆತ್ತವರನ್ನೆಲ್ಲ ಮರೆತು ,
ಅದೇಹುಡುಗಿ ಕೈ ಕೊಟ್ಟಾಗ ದುಖಿಸುವವರಿಗೆ ನನ್ನ ಸಲಹೆ,,,,,

ಆಸೆ ನಿಜ ಮಹದಾಸೆ ನಿಜ
ಹುಡುಗಿಯ ಮೇಲಿನ ಮೋಹ ನಿಜ
ಆಸೆ ನಿಜ ಮಹದಾಸೆ ನಿಜ
ಹುಡುಗಿಯು ತೋರಿದ ಪ್ರೀತಿ ನಿಜ
ಎಂದಾ ಹುಡುಗನ ಬಾಳ್ಗೆ ಸಜ
ವಯಸಿನ ಸಮಯದಿ ಕಾಡಿದ ಬಯಕೆಗೆ
ಆಕೆಯು ಮಾಡಿದ ಮಾಟ ನಿಜ
ಆಟದ ನೆವದಲಿ ತೋರಿದ ದಾರಿಗೆ
ಆಕೆಯು ಹಾಕಿದ ಸೇತು ನಿಜ
ಎಂದಾ ಹುಡುಗನ ಬಾಳ್ಗೆ ಸಜ
ಕಾಲದ ಹರಣಕೆ ಮಾಡಿದ ಕರೆಯಲಿ
ಆಡಿದ ಮಾತಿನ ಸಾರ ನಿಜ
ಪ್ರೀತಿಯ ತೋರಿ ಸ್ನೇಹವ ಬೀರಿ
ಸ್ನೇಹದಿ ನೀಡಿದ ಬಾಷೆ ನಿಜ
ಎಂದಾ ಹುಡುಗನ ಬಾಳ್ಗೆ ಸಜ
ಖರ್ಚಿನ ದಾರಿಗೆ ನೀನೆ ವಾಹನ
ಎನ್ನುವ ಪ್ರೀತಿ ಎಷ್ಟು ನಿಜ
ಇಂಧನವಿಲ್ಲದ ವಾಹನ ಬೇಡ
ಎನ್ನುವ ಪ್ರೀತಿ ಅಲ್ಲನಿಜ
ಎಂಬುದ ಅರಿತರೆ ಬಾಳೇ ನಿಜ - ಬಾಳುವೆ ನೀನು ಹೇ ಮನುಜ ,,,,

Thursday, July 29, 2010

ಮಿಡಿತ

ನಿನ್ನ ನಡೆಯ ನೋಡಿ ಮನದಾಸೆ ಕಾಡಿ
ನಿದಿರೇನೆ ಬರದೆ ಹೋಯ್ತೋ
ನಿನ್ನ ಕಣ್ಣ ನೋಟ ನಿನ್ನ ಮೈಯ ಮಾಟ
ನನ್ನೆದೆಯ ಕಸಿದುಕೊಂತು
ನಿನ್ನ ಕಂಡ ದಿನವೇ ನಾ ಸೋತುಹೋದೆ
ನಿನ್ನ ಚೆಲುವ ದಾಸನಾದೆ
ನಿನ್ನ ನುಡಿಯ ಕೇಳಿ ಮನಕರಗಿ ಹೋಗಿ
ನಿನ್ಹಿಂದೆ ನಾನೇ ಬಂದೆ
ನಿನ್ನೊಡನೆ ಕಳೆದ ಆ ಮಧುರ ಕ್ಷಣವು
ಇನ್ನೆಂದು ಮುಂದೆ ಬರದು
ಅದ ನೆನೆದು ನೆನೆದು ಪ್ರತಿ ಕ್ಷಣವು
ನನ್ನ ಮನವು ಮಿಡಿಯುತಿಹುದು
ದಿನ ದಿನವು ನನ್ನ ಮನದೊಳಗೆ ನಿನ್ನ
ಮಧುರ ನೆನಪು ಇಹುದು
ಪ್ರತಿ ಕ್ಷಣವು ನನ್ನ ಮನದಾಳವಿಂದು
ನಿನಗಾಗಿ ಮಿಡಿಯುತಿಹುದು

Monday, July 26, 2010

ನನ್ನ ಬದುಕು

ಬರದ ಬೆಂಗಾಡಿನಲಿ
ಉರಿವ ಬಿಸಿಲಿನ ನಡುವೆ
ಸಿಕ್ಕ ತರಗೆಲೆಯಂತೆ
ನನ್ನ ಬದುಕು
ಉಳಿದ ಜೀವದ ಜೊತೆಗೆ
ಹುಡುಕಿ ನೀರಿನ ಕಡೆಗೆ
ಹೊರಟ ನಾರಿಯ ತೆರದಿ
ನನ್ನ ಬದುಕು
ಕಾಯುವವರಿಲ್ಲದೆದೆ
ಮರಣ ಶಯ್ಯೆಯ ಕಾವ
ಹದ್ದಿನ ಕನ್ನಿನದಿ
ನನ್ನ ಬದುಕು
ಇಂಥ ಕಷ್ಟದ ನಡುವೆ
ವಿಷಮದ ಸುಳಿಯಲ್ಲಿ
ತೆಗೆದ ಚಿತ್ರದ ಜೊತೆಗೆ
ಕೊನೆಯಾಯಿತು
ನನ್ನ ಬದುಕು
ಆರಿಗೂ ಬರದಿರಲಿ
ಈಪರಿಯ ಸಂಕಟವು
ಬೇಡುವುದು ಪರಷಿವನ ಎನ್ನ ಜೀವ
ಇಲ್ಲಿಗೇ ಕೊನೆಯಾಯಿತು
ನನ್ನ ಬದುಕು ,.

ಸ್ವ ಉದ್ಯೋಗ ,

ನಾನು ನಿರುದ್ಯೋಗಿ ಎನ್ನುವವರಿಗೆ ನನ್ನ ಸಲಹೆ ,


ಎಲ್ಲಾರಿಗೂ ಆಸೆ ಪಡೆಯ ಬೇಕೆಂದು

ಸರಕಾರೀ ಉದ್ಯೋಗ

ಆದರೆ ಎಲ್ಲರಿಗೂ ಇಲ್ಲ

ಅದ ಪಡೆಯುವ ಯೋಗ

ಮಾಡುವರು ಅದಕ್ಕಾಗಿ

ಧನ ವಿನಿಯೋಗ

ಕೆಲವರು ರಾಜಕಾರಣಿಗಳ

ಬಲ ಪ್ರಯೋಗ

ಅರ್ಹತೆಯುಳ್ಳವನಿಗೆ

ಅನ್ಯಾಯ

ಅನರ್ಹರಿಗೆ ಇದರಿಂದ

ಆದಾಯ

ಪ್ರಮಾಣ ಪತ್ರ ದೊಂದಿಗೆ

ಅಲೆದಾಟ

ಸಹವಾಸವಲ್ಲಪ್ಪ

ಕೆಲಸಕ್ಕಾಗಿ ಓಡಾಟ

ಅಕ್ಷರ ಜ್ಞಾನ ವಿಲ್ಲದವನೇ

ಅಧಿಕಾರಿ

ಪದವೀಧರನಾಗುವ

ಬೀದಿ ಭಿಕಾರಿ

ತಾಳ್ಮೆ ಇಂದಿರಿ ಎಲ್ಲರಿಗೂ

ಸಿಗುವುದು ಉದ್ಯೋಗ

ಇಲ್ಲದಿದ್ದರೆ ಮಾದಿ

ಸ್ವ -ಉದ್ಯೋಗ

ನಾನು ಕಂಡಂತೆ ,

ಹಳ್ಳಿ ಜೀವನ ಬಿಟ್ಟು ಸಿಟಿ ಬಸ್ ಹತ್ತಿ ಬೆಂಗಳೂರಿನಲ್ಲಿ ಬಂದು ಇಳಿದಾಗ ನಾನು ಕಂಡದ್ದು.,ಅದನ್ನು ನನ್ನ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡ್ತಾ ಇದ್ದೇನೆ.
ಕರೆಯುವರೆಲ್ಲರು , ಬೆಂಗಳೂರು
ಉದ್ಯಾನ ನಗರಿ
ಆದರೆ ಇಲ್ಲೂ ಇದೆ ಬೇಜಾನ್
ಕೊಳೆಗೇರಿ
ಹಾಗೇ ಹಳ್ಳಿಜನರ ರೀತಿ ನೀತಿ,ಉಡುಗೆ ತೊಡುಗೆ ನೋಡಿದ ನನಗೆ ಅನಿಸಿದ್ದು,
ಇಲ್ಲಿನ ಯುವತಿಯರಿಗೆ
ತುಂಡು ಬಟ್ಟೆಯೇ ಇಷ್ಟ
ಎಸ್ಟ್ ಎಂದರೆ
ಟೈಲೋರ್ಗೆ ಟೆಪೆ ನಲ್ಲಿ ಅಳೆಯಲೂ ಕಷ್ಟ
ಅದನ್ನೇ ಕೃಷಿ ಕೆಲಸಕ್ಕೆ ಹೋಲಿಸಿದಲ್ಲಿ
ತುರುಕುವರು ತಮ್ಮನ್ನು
ಬಟ್ಟೆ ಯೊಳಗೆ
ತುಂಬುವಂತೆ ಧಾನ್ಯ ವನ್ನು
ಕಣಜದ ಒಳಗೆ ................